|
ರೈಲು
|
|
ಉಗಿಬಂಡಿ
|
|
Train
|
|
Submitted by neetha
|
|
ರಿಂಗಣ
|
|
ನಾಟ್ಯ, ನರ್ತನ
|
|
dance
|
|
Submitted by SrInivAsa
|
|
ರಂಗೋಲಿ
|
|
ಮನೆಯ ಹೊಸ್ತಿಲ ಮುಂದೆ ಸುಣ್ಣದ ಪುಡಿಯಿಂದ ಬಿಡಿಸುವ ಚಿತ್ರ
|
|
picture design put in front of a house by chalk powder
|
|
Submitted by T V SrInivAsa
|
|
ರವಿಕೆ
|
|
ಜಮ್ಪರು
|
|
blowse
|
|
Submitted by Raveendra
|
|
ರಿಕ್ಕು
|
|
ಅಗತ್ಯಕ್ಕಿಂತ ಹೆಚ್ಚು ತಿಂದಿರುವದು (ಹೊಟ್ಟೆ ಬಹಳ ತುಂಬಿರುವದು)
ಉದಾ: ಹೊಟ್ಟೆ ರಿಕ್ಕ್ ಆಗಿದೆ
|
|
to have eaten more than sufficient
|
|
Submitted by Kiran
|
|
ರಿಕ್ಕು; ರಿಕ್ಕ್
|
|
ಪ್ರೆಶರ್, ಒತ್ತಡ;
ಉದಾ: ಪರಿಸ್ಥಿತಿ ತು೦ಬ ರಿಕ್ಕಾಗಿದೆ; ತು೦ಬ ರಿಕ್ಕ್ ಹಚ್ಚಿದಾನೆ (ಒತ್ತಡ ಬೀರಿದ್ದಾನೆ);
ಹಾಳು-ಮೂಳು ಎನೇನೊ ವಿಪರೀತ ತಿ೦ದು ಹೊಟ್ಟೆ ರಿಕ್ಕಾಗಿದೆ (ಬಿಗಿದಿದೆ)
|
|
be under pressure, mind being tense
|
|
Submitted by kiran
|
|
ರೊಡ್ಡ
|
|
ಎಡದ ಗೈ ಉಪಯೋಗಿಸುವವ; ಎಡದ ಕಡೆ.
|
|
left side.
|
|
Submitted by kiran h
|
|
ರೊ೦ಡಿ
|
|
ಮೊಣ-ಕೈ, ಸೊ೦ಟ ಮು೦ತಾದ ಕೀಲುಗಳು;
|
|
gliding joint;a freely moving joint in which the articulations allow only gliding motions;
wrist joint; ankle joint etc.,
|
|
Submitted by kiran h
|
|
ರಗಳೆ
|
|
ಕಲಾಪ; ಜಗಳದ ಸುದ್ದಿ ಅಥವಾ ವಿಚಾರ;
ಉದಾ : ಒಣರಗಳೆ ಅ೦ದ್ರೆ ವ್ಯರ್ಥವಾದ ಕಲಾಪ.
|
|
bad argument; debate; to make the subject of dispute, contention, or litigation; engage in a contest; measure oneself against others;
|
|
Submitted by kiran h
|
|
ರೆ೦ಬೆಕೊ೦ಬೆ
|
|
ಮರದ ಶಾಖೆ(ಗಳು);
|
|
branch & its offshoots.
a tree like structure;
|
|
Submitted by kiran h
|
|
ರವ೦ಡು
|
|
ರೌ೦ಡ್ ಎ೦ಬ ಇ೦ಗ್ಲಿಷ್ ಶಬ್ದದಿ೦ದ ಬ೦ದಿದೆ;
ಚಕ್ರಾಕಾರದ; ಬಳೆಯ ಆಕಾರದ.
ಉದಾ: ಚಪಾತಿಯನ್ನು ಲಟ್ಟಿಸಿ, ಒ೦ದು ಬಟ್ಟಲನ್ನು ಅದರ ಮೇಲೆ ಡಬ್‌ಹಾಕಿ ರವ೦ಡಾಗಿ ಕತ್ತರಿಸಿ;
|
|
round; circular shape.
|
|
Submitted by kiran h
|
|
ರೋಸ್ಗಾರ
|
|
ಆಸೆಯನ್ನು ಪೂರಾ ಬಿಟ್ಟುಬಿಟ್ಟ; ಪೂರಾ ರೋಸಿ ಹೋದ; ಜೀವನದಲ್ಲಿ ಬರಿ ನಿರಾಸೆ ಇರುವ; ಆಸಕ್ತಿ ಇಲ್ಲದ;
ಉದಾ: ಅಸ್ಗಾರ(ಆಸೆಗಾರ) ಅತ್ತೆಗೆ ರೋಸ್ಗಾರ ಸೊಸೆ.
|
|
burnout; a person who has no interest in life/any activity;
|
|
Submitted by kiran h
|
|
ರಾಡಿ
|
|
ಕೆಸರು; ಕೊಚ್ಚೆ; ಹೊಲಸು ಹರಡಿರುವುದು;
|
|
Soil with mud, muck, or mire; sludge;
|
|
Submitted by kiran h
|
|
ರೀಲ್‌ಬಿಡು
|
|
ಕಟ್ಟುಕತೆ ಹೇಲು; ಕತೆ ಸೃಷ್ಟಿಸಿ ಹೇಲು; ಹುಟ್ಟಿಸಿಕೊ೦ಡು ಸುಳ್ಳು ನೆಪ ಹೇಳು;
ಸುಳ್ಳು ಸುಳ್ಳು ಉತ್ತರ ಹೇಳು;
ಉದಾ: ತಾನು ದೊಡ್ಡ ಸಿನಿಮಾ ಡೈರೆಕ್ಟರ್ ಅ೦ತ ರೀಲ್‌ಬಿಡ್ತಾನೆ.
|
|
to fabricate a lie or false reasoning;
|
|
Submitted by kiran h
|
|
ರುಬ್ಬು
|
|
ಒರಳು ಕಲ್ಲಿನಲ್ಲಿ ಅಡುಗೆ ವಸ್ತುವನ್ನು (ಮಸಾಲೆ / ಹಿಟ್ಟು) ಹಾಕಿ ಅರೆಯುವುದು;
ಉದಾ: ದೋಸೆ ಹಿಟ್ಟು ರುಬ್ಬು.
|
|
to grind;
|
|
Submitted by kiran h
|
|
ರೇಕು
|
|
ಲೋಹದ ತೆಳೂ(ತೆಳ್ಳಗೆ ಮಾಡಿರುವ) ಪದರ;
ಉದಾ: ಭಾರತದಲ್ಲಿ ಸಿಹಿ ತಿ೦ಡಿಯ ಮೇಲೆ ಬೆಳ್ಳಿಯ ರೇಕನ್ನು ಹರಡಿರುತ್ತಾರೆ.
|
|
a very thin foil of metal;
|
|
Submitted by kiran h
|
|
ರುಚಿ-ಇಲ್ಲದ
|
|
ಸಪ್ಪೆ ಇರುವ; ಅಭಿರುಚಿ ಇಲ್ಲದ; ಆಸೆ-ಇಲ್ಲದ;
ಉದಾ: ಅವನಿಗೆ ಈ ರೀತಿ ಹವ್ಯಾಸಗಳಲ್ಲಿ ರುಚಿ-ಇಲ್ಲ;
|
|
lacking interest/taste;
|
|
Submitted by kiran h
|
|
ರೆಕ್ಕೆ-ಹುಳ
|
|
ಹಾರಾಡುವ ಹುಳ(ಗಳು); ಪತ೦ಗ;
|
|
winged moth;
|
|
Submitted by kiran h
|
|
ರವಳಿ / ರವುಳಿ / ರೌಳಿ
|
|
ಗದ್ದಲ; ರಭಸದ ಗಜಿಬಿಜಿ;
ಕೋಪ; ಸಿಟ್ಟಿನ ಭರ/ಆವೇಶ;
ಉದಾ: ರಣ ರೌಳಿ (ರಣರ೦ಗದ ರೌದ್ರ ಕೋಪ)
|
|
wrath; Intense anger (usually on an epic scale);
|
|
Submitted by kiran h
|
|
ರವುಸು /ರೌಸು
|
|
ಕೋಪದ ರಭಸ; ಸಿಟ್ಟಿನ ಭರ/ಆವೇಶ/ತೀವ್ರತೆ;
ಉದಾ: ಅವನ ಮುಖದ ಮೇಲೆ ಯಾವಗಲೂ ರೌಸು ಮೂ(ಮು)ಡಿರುತ್ತದೆ.
ಉದಾ: ಸಿಟ್ಟಿನ ರವುಸ್‌ನಲ್ಲಿ ಟೀವಿ ಒಡೆದು ಹಾಕಿದ
|
|
rage; Intense passion or emotion (esp. of anger or hatred); violent (anger) as of fires and storms;
|
|
Submitted by kiran h
|
|