kannadakasturi.com
Submit Your words
Browse >> ಅಂ ಅಃ All
 
browsing the dictionary:
2285 words found
Page 1 of 115
ವಿದ್ಯುದಂಚೆ
       ಗಣಕಯಂತ್ರ ಅಥವಾ ಇನ್ಯಾವುದೇ ಆಧುನಿಕ ಸುಧಾರಿತ ವಿದ್ಯುತ್ ಉಪಕರಣಗಳಿಂದ ಬರೆಯಬಹ್ದಾದಂತಹ ಅಂಚೆ (ಆಂಗ್ಲ ಭಾಶೆಯ "ಇ-ಮೆಯ್ಲ್" ಗೆ ಕನ್ನಡದಲ್ಲಿ ಬಳಸಬಹುದಾದಂತಹ ಪದ)
       E-mail
Submitted by  Gamma Pegasi

ಜವಾರಿ
       ನಾಟಿ, ದೇಶಿ, ಗ್ರಾಮ್ಯ, ಸಂಕರಗೊಳ್ಳದ. ಉದಾ: ಜವಾರಿ ಬದನೆಕಾಯಿ, ಜವಾರಿ ಕೋಳಿ, ಜವಾರಿ ಕಡಲೆ, ಜವಾರಿ ಮನುಷ್ಯ
       native, rustic, unadulterated
Submitted by  guggarigoudar

ನಾಗೊಂದಿ
       ಮನೆಯಲ್ಲಿಯ ಕಂಬ ಮತ್ತು ಸೂರಿನ ನಡುವೆ ಮಾಡಿದ ಸಣ್ಣ ಜಾಗ ಉದಾ: ಬೆಂಕಿಪೊಟ್ಟಣ ನಾಗೊಂದಿಯ ಮೇಲೆ ಇದೆ ನೋಡು
       a small platform above the pillar near the roof to keep small articles
Submitted by  guggarigoudar

ಹೈರಾಣ
       ದಣಿ, ಸೋತುಹೋಗು (ಉರ್ದು:ಹೈರಾನ್=ಆಶ್ಚರ್ಯಚಕಿತ) ಉದಾ: ಗುಡ್ಡ ಹತ್ತಿ ಗುಡಿಗೆ ಬರುವ ಹೊತ್ತಿಗೆ ಹೈರಾಣಾಗಿಬಿಟ್ಟೆ.
       tired, exhausted
Submitted by  guggarigoudar

ಜಂಪಲು ಹಿಡಿ
       ಸಣ್ಣಗೆ ಸತತವಾಗಿ ಸೋರು, ಜಿನುಗು. ಉದಾ: ಉತ್ತರಿ ಮಳೆಯಿಂದ ಮಣ್ಣಿನ ಮನೆಗಳೆಲ್ಲ ಜಂಪಲು ಹಿದಿದುಬಿಡುತ್ತವೆ.
       seep, leak continuously
Submitted by  guggarigoudar

ತಂಬಲು
       ಹಸಿ, ತೊಯ್ದ. ಉದಾ: ತಂಬಲು ಅರಿವೆಯಿಂದ ಪಾತ್ರೆ ಒರೆಸು
       wet, soaked
Submitted by  guggarigoudar

ಗುಗ್ಗರಿ
       ಬೇಯಿಸಿದ ಕಾಳು. ಉದಾ: ಜೋಳದ ಗುಗ್ಗರಿ, ಕಡಲೆಯ ಗುಗ್ಗರಿ
       boiled cereals, pulses
Submitted by  guggarigoudar

ವಣಿಗ್ಗೆ ( ವಣಗಿ)
       ಊಟದಲ್ಲಿ ರೊಟ್ಟಿ, ಚಪಾತಿಯ ಜೊತೆಗೆ ಬೇಕಾದ ಸಾಧನ, ಪಲ್ಯ ಉದಾ : ಬದನೆಕಾಯಿ ವಣಿಗ್ಗೆ, ಹೆಸರುಕಾಳು ವಣಿಗ್ಗೆ
       side dish to accompany main meal especially with Rotti, Chapati( tortilla)made of vegetables or pulses
Submitted by  guggarigoudar

ವಿಪ್ಲವ
       ವಿಕೋಪ, ಆಪತ್ತು, ಅವಘಡ
       
Submitted by  Renuka Prasad K.U.

ಹುತಾರು
       ಸ್ರುಸ್ಟನೆ ಅಥವ ಸಂಚು
       create or conspire
Submitted by  vijaykumar

ಕಮತ
       ಕಮ್ಮಾರ ಕೆಲಸ
       blacksmith
Submitted by  vijaykumar

ಅಜಿ-ಗಿಜಿ
       ಅಸ್ತ-ವ್ಯಸ್ತ;
       disorderly
Submitted by  kiran h

ಸುಯ್ದಾನ/ಸುಯಿದಾನ
       ರಕ್ಷಣೆ; ಕಾಪಾಡುವಿಕೆ;
       protection;
Submitted by  kiran h

ನಗೆನುಡಿ
       ಹಾಸ್ಯದ ಮಾತನ್ನು ಆಡುವುದು; ನಗೆಬರುವಂತೆ ಮಾತನಾಡುವುದು; ನಗೆಚಾಟು ಆಡುವುದು;
       to jest; to tell a joke; speak amorously;
Submitted by  kiran h

ಬಿಸಿಪಿನ-ಶಕ್ತಿ
       ಬಿಸಿಪು = ಬಿಸಿಲಿನ ತಾಪ; ಸೌರ-ಶಕ್ತಿ; ಬಿಸಲಿನ-ಶಕ್ತಿ; ಬಿಸಿಲ-ಶಕ್ತಿ;
       solar-energy;
Submitted by  kiran h

ಬಿಸಿಲ-ಶಕ್ತಿ
       ಸೌರ-ಶಕ್ತಿ
       solar-energy
Submitted by  kiran h

ಗವುಜಿ ಬಿಕ್ಕಟ್ಟು
       ಟ್ರಾಫಿಕ್ ಜಾಮು; ಟ್ರಾಫಿಕ್ ಬಿಕ್ಕಟ್ಟು; ಗಾಡಿಗಳ ಓಡಾಟ ಅಸ್ಥವ್ಯಸ್ಥವಾಗಿ ತೊಂದರೆಯಾಗಿರುವುದು;
       traffic jam;
Submitted by  kiran h

ಗವುಜಿ ದೀಪ
       ಟ್ರಾಫಿಕ್ ದೀಪ; ಟ್ರಾಫಿಕ್ ಲೈಟು; ವಾಹನ ಓಡಾಟವನ್ನು ಅಂಕೆಯಲಿಟ್ಟಿರುವ/ನಿಯಂತ್ರಿಸುವ ದೀಪ;
       traffic light;
Submitted by  kiran h

ಗವುಜಿ
       ಗಜಿ-ಬಿಜಿ; ಟ್ರಾಫಿಕ್ಕು; ವಹಾನ ದಟ್ಟಣೆ;
       traffic;
Submitted by  kiran h

ಪೋಟಿಗಾರ
       ಪೈಪೋಟಿ ನಡೆಸುವವ; ಪ್ರತಿಸ್ಪರ್ದಿ;
       competitor;
Submitted by  kiran h

 

 
 
Home     Web Services       Download     Contact us    Press release     Disclaimer